ಅಂತರಂಗಕ್ಕಿಳಿಯುವ ಮುನ್ನ……

ನಾನು ಬರೆಯಬಲ್ಲೆನಾ? ಈ ಪ್ರಶ್ನೆ ಸುಮಾರು ಸಲ ನನ್ನನ್ನೇ ಕೇಳಿಕೊಂಡಿದ್ದೀನಿ. ಬರವಣಿಗೆಯು ಒಂದು ಕಲೆ. ಅದು ಕರಗತವಾಗಲು ಒಳ್ಳೆಯ ಹಿನ್ನಲೆ ಬೇಕು. ಹಳ್ಳಿಯ ವಾತಾವರಣ, ನದಿಯ ಸೊಗಸು, ಹಕ್ಕಿಗಳ ಚಿಲಿಪಿಲಿ ಇದನ್ನೆಲ್ಲ ಅನುಭವಿಸುತ್ತಾ ಕಳೆವ ಬಾಲ್ಯ. ಸಾಹಿತ್ಯದ ಬಗ್ಗೆ ಅಪರಿಮಿತ ಪ್ರೀತಿ, ಬೆಳೆಯುತ್ತಿದ್ದಂತೆ ಹೆಚ್ಚು ಹೆಚ್ಚು ಓದಬೇಕೆನ್ನುವ ಹಂಬಲ, ಪ್ರಸಿದ್ದ ಕವಿಗಳ, ಲೇಖಕರ ಬಗ್ಗೆ ಜ್ಞಾನವಿರುವವರು ಒಳ್ಳೆಯ ಬರಹಗಾರರಾಗಬಹುದೆಂಬ ಅಭಿಪ್ರಾಯವಿದೆ. ಭೂತಗನ್ನಡಿ ಹಾಕಿ ಹುಡುಕಿದರೂ ನನ್ನಲ್ಲಿ ಇದರಲ್ಲಿನ ಒಂದಂಶವೂ ಇಲ್ಲ. ಹೇಳಿ ಕೇಳಿ ನನ್ನದು ಬೆಂಗಳೂರು. ಇಲ್ಲಿನ ವ್ಯಾವಹಾರಿಕ ಜನ, ವೇಗದ ಬದುಕು, ಭಾವನೆಗಳಿಲ್ಲದ ಮನಸುಗಳ ಮಧ್ಯೆಯೇ ಹುಟ್ಟಿ, ಬೆಳೆದು, ಬದುಕುತ್ತಿದ್ದೀನಿ. ಗುಬ್ಬಚ್ಚಿಯನ್ನು ಚಿಕ್ಕ ವಯಸ್ಸಿನಲ್ಲಿ ಯಾವಾಗೋ ನೋಡಿರುವ ನೆನಪು! ಬರವಣಿಗೆಗೆ ಇದೆಲ್ಲ ಅಗತ್ಯವಾ? ಗೊತ್ತಿಲ್ಲ. ಆದರೂ ಬರೆಯುವ ಸಾಹಸ ಮಾಡುತ್ತಿರುವೆ. ಭಾವನೆಗಳನ್ನು ಹೊರಗೆಡವಲು ಯಾವುದಾದರೂ ಮಾಧ್ಯಮ ಬೇಕು, ನನಗೆ ತೋಚಿದ್ದು ಬರವಣಿಗೆ. ಬೆಂಗಳೂರು ಹುಡುಗೀರಂದ್ರೆ, ತಮ್ಮ ತೂಕ, ತಮ್ಮ ಮೇಕಪ್, ಫ್ಯಾಶನ್  ಮ್ಯಾಗಸೀನ್, ಫಿಲ್ಮಿಗಾಸಿಪ್ಸ್ ಗಳಲ್ಲೇ ಕಳೆದು ಹೋಗಿರುವ, ಕನ್ನಡದ ಗಂಧವೇ ಗೊತ್ತಿಲ್ಲದವರಂತೆ ಇಂಗ್ಲಿಷನ್ನೇ ತಮ್ಮ ಮಾತೃ ಭಾಷೆಯನ್ನಾಗಿಸಿಕೊಂಡಿರುವವರು ಎಂಬ ಕಲ್ಪನೆ ದಟ್ಟವಾಗಿರುವಾಗ ಬರೆಯುವ ಸಾಹಸಕ್ಕೆ ಕೈ ಹಾಕಲು ತುಸು ಹಿಂಜರಿಕೆ ಆಗುತ್ತಿದೆ. ಆದರೂ ಇನ್ನು ಬರೆಯದೇ ಇರುವುದಕ್ಕಾಗುವುದಿಲ್ಲವೆನಿಸಿ ಬ್ಲಾಗಿಂಗ್ ಶುರುವಿಟ್ಟುಕೊಂಡಿದ್ದೇನೆ! ಬರವಣಿಗೆ, ನನ್ನ ಭಾವನೆಗಳನ್ನು ಹರಿಬಿಡಲು ನಾನು ಹುಡುಕಿಕೊಂಡ ದಾರಿಯಷ್ಟೆ.  ಭೋರ್ಗರೆವ ಭಾವಗಳಿಗೆ ಅಕ್ಷರಗಳ ಬೊಗಸೆಯೊಡ್ಡಿ ಬ್ಲಾಗಿನ ಒಡಲಲಿ ತುಂಬುತ್ತಿರುವೆ. ನನ್ನಂತರಂಗಕ್ಕೆ ನಿಮೆಗೆಲ್ಲರಿಗೂ ಸ್ವಾಗತ.

    • uniquesupri
    • ನವೆಂಬರ್ 9th, 2008

    ನಿಮ್ಮಂತರಂಗಕ್ಕೆ ಇಷ್ಟು ಬೇಗ ಪ್ರವೇಶ ಸಿಕ್ಕುಬಿಡುತ್ತಾ? ಎಷ್ಟೇ ಆಗಲಿ ಬೆಂಗಳೂರು ಹುಡುಗಿ ಅಲ್ಲವಾ? 🙂 (ಸುಮ್ನೆ ತಮಾಶೆಗೆ)
    ಬರೆಯೋದಕ್ಕೆ ಯಾವ ಅರ್ಹತೆಯೂ ಬೇಕಿಲ್ಲ ಎಂದು ನಂಬಿದವನು ನಾನು. ಪಕ್ಷಿ ಹಾಡುವ ಮುನ್ನ ಯಾವ ಯುನಿವರ್ಸಿಟಿಯ ಸರ್ಟಿಫಿಕೇಟು ಸಂಪಾದಿಸಿಕೊಂಡಿರುತ್ತದೆ? ಅಲ್ಲವೇ?
    ನಿಮ್ಮಂತರಂಗದ ಪಲ್ಲಟಗಳನ್ನು, ಸಂವೇದನೆಗಳನ್ನು ನಮ್ಮಂತರಂಗಕ್ಕೆ ದಾಟಿಸಲು ಈ ಬ್ಲಾಗು ಸೇತುವೆಯಾಗಲಿ ಎಂದು ಹಾರೈಸುವೆ….

    ಸುಪ್ರೀತ್

  1. Bengaluru huDgi kannaDadalli blog baryodu nODidre khushi aagtide…

    jai.. 🙂

  2. ಸುಪ್ರೀತ್ ನಿಮ್ಮಂತಹ ಶುದ್ದ ಮನಸ್ಸಿನವರಿಗೆ ಖಂಡಿತ ಸಿಗುತ್ತದೆ (ಇದು ತಮಾಶೆಯಲ್ಲ 🙂 ). ಬರೆಯೋದಕ್ಕೆ ಯಾವ ಅರ್ಹತೆಯೂ ಬೇಕಿಲ್ಲ ಎಂಬ ನಂಬಿಕೆಯ ಮೇಲೆಯೆ ಬರೆಯುತ್ತಿದ್ದೇನೆ. ನಿಮ್ಮ ಹಾರೈಕೆ ನಿಜವಾದರೆ ನನ್ನ ಬ್ಲಾಗು, ಬರವಣಿಗೆ ಎರಡು ಸಾರ್ಥಕ.

    ವಿಕಾಸ್ ನಂಗೂ ಖುಷಿಯಾಗ್ತಿದೆ. ನಾನು ಬರೆಯೋದು ಚೆನ್ನಾಗಿಲ್ಲ ಅಂದ್ರೆ ಧಿಕ್ಕಾರ ಅನ್ಬೇಡ್ರಿ ಮತ್ತೇ 😉

    • bareyodakke neevu list madiddella beka antha keLikonDu, gothilla antha heLi blog shuru maDiddu oLLedaythu. neevu list madiddella baravaNigege mukhya irabahudu. adare bareyuva hummassu iddare adella beke beku antha nanage annisodilla. All the best!

  3. ನಾನು ಬರೆಯಬಲ್ಲೆನಾ ಎಂಬ ಅಳುಕನ್ನು ವ್ಯಕ್ತಪಡಿಸಿ ಬರೆದ ಬರಹವೂ ಚೆನ್ನಾಗೇ ಇದೆಯಲ್ಲಾ!!!

  4. bengalorru hudugiyaadaroo..nimma baravanige chennage ide hema avare….
    neevu elliddarenante nimma antaralada bhavanegalu elliddarooo adu onde reetille iruttade allwe?????….
    shubhaharaikegalu..

    • Prashanth
    • ಮಾರ್ಚ್ 6th, 2009

    ನಿಮ್ಮ ಮುನ್ನುಡಿ ತುಂಬಾ ಚೆನ್ನಾಗಿದೆ….ನಿಮ್ಮ ಬರೆವಣಿಗೆ ಹೀಗೆ ಮುಂದುವರೆಯಲಿ…ನಾವುಗಳು ಆವಾಗವಾಗ ಇಣುಕಿ ನೋಡ್ತಿವಿ 🙂
    ಇಂತಿ
    ಮೈಸೂರು ಹುಡುಗ

    • Harsha
    • ಮಾರ್ಚ್ 18th, 2009

    Hemakka,

    Hegiddira, nim blog munnudi sakathaagide.

    Harsha
    http://www.harshaswings.blogspot.com

  5. ಅದು ಕರಗತವಾಗಲು ಒಳ್ಳೆಯ ಹಿನ್ನಲೆ ಬೇಕು

    ನನಗೆ ತಿಳಿದ ಮಟ್ಟಿಗೆ ಉತ್ತಮ ಬರಹಕ್ಕೆ ಇದರ ಅವಶ್ಯಕತೆಯೇನೂ ಜರೂರಿಲ್ಲ. ನಿಮ್ಮ ಬರಹ ಉತ್ತಮವಾಗಿದೆ

    ಇನ್ನೂ ಹೆಚ್ಚು ಹೆಚ್ಚು ಬರೆಯಿರಿ, ಬರೆದು ನಿಮ್ಮ ಬ್ಲಾಗೆಂಬ ಉಗ್ರಾಣವನ್ನು ಸಿರಿವಂತಗೊಳಿಸಿ

    ಒಳ್ಳೆಯದಾಗಲಿ

    ಗುರುದೇವ ದಯಾ ಕರೊ ದೀನ ಜನೆ

  6. Santhosha neevillirodu 🙂
    Barita iri…naviddivi nimmodane 🙂
    Sunil.

  7. Nimma lekhanagaLella odide, tumba ishTa aitu 🙂 chennagive ..heege bareeta iri 🙂

  8. ಗ್ರೀಶ್ಮ,

    ಬರವಣಿಗೆ ಬಗ್ಗೆ ಇರುವ ಅಳುಕೂ ಬರೆದೇ ಹೇಳಬೇಕೆಂಬುದು ವಿಪರ್ಯಾಸ! ಚೆನ್ನಾಗಿದೆ ಎಂದಿದ್ದಕ್ಕೆ ಥ್ಯಾಂಕ್ಸ್

  9. ಸ್ವಾತಿಮುತ್ತು,

    ನಿಮ್ಮ ಮಾತು ನಿಜ. ಶುಭಹಾರೈಕೆಗಳಿಗೆ ಧನ್ಯವಾದಗಳು.

    ಮೈಸೂರು ಹುಡುಗ,
    ನೀವು ಇಣುಕುವಿರಿ ಎಂದೇ ನಾನು ಅವಗಾವಾಗ ಬರೆದು ನೋಡ್ತೀನಿ! ಧನ್ಯವಾದಗಳು.

    ಹರ್ಷ,
    ನಾನು ಸೂಪರ್ ತಮ್ಮಯ್ಯ, ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

    ತವಿಶ್ರೀ,
    ಧನ್ಯವಾದಗಳು.

    ಅನಿಕೇತನ,
    ಥ್ಯಾಂಕ್ಸ್, ಬರೆಯುವೆ.

    ಭಕ್ತರವರೇ,
    ಧನ್ಯವಾದಗಳು.

    • BheemRao
    • ನವೆಂಬರ್ 22nd, 2009

    ಬರೆಯೋದಕ್ಕೆ ಯಾವ ಅರ್ಹತೆಯೂ ಬೇಕಿಲ್ಲ ಎಂದು ನಂಬಿದವನು ನಾನು.ನಿಮ್ಮ ಮುನ್ನುಡಿ ತುಂಬಾ ಚೆನ್ನಾಗಿದೆ….ನಿಮ್ಮ ಬರೆವಣಿಗೆ ಹೀಗೆ ಮುಂದುವರೆಯಲಿ…

  1. No trackbacks yet.

Leave a reply to hemapowar123 ಪ್ರತ್ಯುತ್ತರವನ್ನು ರದ್ದುಮಾಡಿ