ವಿವೇಕಾನಂದರು ನಮಗೆಷ್ಟು ಗೊತ್ತು?


ಈಗಾಗಲೇ ಕಾಂಟ್ರಾವರ್ಷಿಯಲ್ ನ ಉತ್ತುಂಗದಲ್ಲಿರುವ ವಿವೇಕಾನಂದರ ಬಗ್ಗೆ ಅವಹೇಳನಕಾರಿಯಾಗಿ ಹೇಳಲಾಗಿದೆ ಎನ್ನಲಾದ ದಿನೇಶ್ ಅಮಿನ್ ಮಟ್ಟುರವರ ಲೇಖನದ ರೆಫರೆನ್ಸ್ ಇಟ್ಟುಕೊಂಡೇ ಬರೆಯುತ್ತಿದ್ದೇನೆ. ಶಾಲೆಯ ದಿನಗಳಲ್ಲಿ ನನಗೆ ವಿವೇಕಾನಂದರು ಅಮೇರಿಕಾದಲ್ಲಿ ಭಾಷಣ ಮಾಡಿದವರು, ಹೊರದೇಶದಲ್ಲಿ ಭಾರತದ ಬಗ್ಗೆ ಮಾತನಾಡಿ ಮನ್ನಣೆ ಪಡೆದವರು ಎಂಬಂತಹ ಬೇಸಿಕ್ ಮಾಹಿತಿಗಳನ್ನು ಬಿಟ್ಟರೆ ಹೆಚ್ಚೇನು ತಿಳಿದಿರಲಿಲ್ಲ. ಕಾಲೇಜಿನ ದಿನಗಳಲ್ಲಿ ವಿವೇಕಾನಂದರ ಬಾಲ್ಯದ ಹೆಸರು ನರೇಂದ್ರ, ಬಡವರ ಬಗ್ಗೆ ಅತೀವ ಕಾಳಜಿ ತೋರಿಸುತ್ತಿದ್ದ ಅವರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿದರೂ ಕಿಟಕಿಯಿಂದ ಕೈಗೆ ಸಿಕ್ಕಿದ್ದನ್ನು ಬಿಕ್ಷುಕರಿಗೆ ದಾನ ಮಾಡಿಬಿಡುತ್ತಿದ್ದರು ಎಂದೆಲ್ಲಾ ಉರು ಹಚ್ಚಿ ಭಾಷಣಗಳಲ್ಲಿ ಒಪ್ಪಿಸುತ್ತಿದ್ದದ್ದೇ ಹೊರತು ಒಬ್ಬ ವ್ಯಕ್ತಿಯಾಗಿ, ಸಾಧಕರಾಗಿ, ಅದೆಷ್ಟೋ ಜನರಿಗೆ ಪ್ರೇರಕ ಶಕ್ತಿಯಾದ ವಿವೇಕಾನಂದರ ಚಿಂತನೆಗಳನ್ನು ನಿಲುವುಗಳನ್ನು ಬಿಂಬಿಸುವಂತಹ ಮಾಹಿತಿ ಶಾಲೆ ಅಥವಾ ಕಾಲೇಜಿನ ದಿನಗಳಲ್ಲಿ ದಕ್ಕುವುದು ವಿರಳವಾಗಿತ್ತು.

ಇಂತಹ ಪುಸ್ತಕದಲ್ಲಿ, ಹೀಗೆ, ಇಂತಹವರು ಹೇಳಿದ್ದಾರೆ ಎಂದು ಇಡೀ ಪುಸ್ತಕವನ್ನೇ ಇಂಡೆಕ್ಸ್ ಮಾಡಿಕೊಂಡಿದ್ದ ಖ್ಯಾತ ಕಾದಂಬರಿಯೊಂದನ್ನು ಓದಿ ವಿವೇಕಾನಂದರ ನಿಜದ ನಿಲುವು ಹೀಗಿತ್ತೇ ಎಂದು ಗೊಂದಲಕ್ಕೊಳಗಾಗಿ ಅವರ ಬಗ್ಗೆ ಓದಲು ತೊಡಗಿದೆ. ಸೆಂಟ್ರಲ್ ಲೈಬ್ರರಿಯ ಹತ್ತಾರು ಪುಸ್ತಕಗಳ ನಡುವೆ ಆಸಕ್ತಿಕರ ಎನಿಸಿದ ಪುಸ್ತಕ ‘Swami Vivekananda On Himself’, ಆತ್ಮ ಕಥೆ ಎಂದು ಹೇಳಲು ಬರದಿದ್ದರೂ ಆ ಪುಸ್ತಕದಲ್ಲಿದ್ದದ್ದೆಲ್ಲಾ ವಿವೇಕಾನಂದರ ಬರಹಗಳೇ, ಅವರ ಡೈರಿಯಿಂದ ಹೆಕ್ಕಿದ್ದು, ಹಲವರ ಜೊತೆ ಹಂಚಿಕೊಂಡ ಪತ್ರಗಳು ಹೀಗೆ ಅವರ ವಿಚಾರಗಳನ್ನು ಹಿಡಿಯಾಗಿ ಬಿಂಬಿಸುವಂತಹ ಪುಸ್ತಕವದು. ಓದಿ ಮುಗಿಸುವಷ್ಟರಲ್ಲಿ ಅವರ ಚಿಂತನೆಗಳಿಂದ ತೀವ್ರ ಪ್ರಭಾವಿತಳಾಗಿದ್ದೆ. ವಿವೇಕಾನಂದರು ಮತ್ತವರ ಚಿಂತನೆಗಳು ಎಲ್ಲಾ ಕಾಲಕ್ಕು ಅನ್ವಯವಾಗುವಂತವು. ತಮ್ಮ ಬರಹಕ್ಕೆ ಬೆಂಬಲಿಸುವಂತದ್ದಷ್ಟೇ ಮುಖ್ಯವಾಗಿಸಿಕೊಂಡು ಅವರು ಹೀಗಿದ್ದರು ನೋಡಿ ನಾನು ಹೇಳುತ್ತಿರುವುದೂ ಅದನ್ನೇ ಎಂದು ತಮ್ಮ ವಿಕೃತಿಯನ್ನು ವಿವೇಕಾನಂದರ ಮೇಲೆ ಹೇರಲೆತ್ನಿಸಿದ ಆ ಖ್ಯಾತ ಕಾದಂಬರಿಕಾರರ ಬಗ್ಗೆ ಯೋಚಿಸಿ ನಗು ಬಂದಿತ್ತು.

ವಿವೇಕಾನಂದರು ಹುಕ್ಕ ಸೇದುತ್ತಿದ್ದರು, ಅವರಿಗೆ ಮದುವೆ ಮಾಡಲು ಅವರ ತಾಯಿ ಇನ್ನಿಲ್ಲದ ಪ್ರಯತ್ನ ಪಟ್ಟು ಸೋತು ನೊಂದಿದ್ದರು, ಎಂಬಷ್ಟೇ ಮಾಹಿತಿಗಳಲ್ಲದೆ ದಿನಗಟ್ಟಲೆ ಧ್ಯಾನದಲ್ಲಿ ಮಗ್ನರಾಗಿರಬಲ್ಲವರಾಗಿದ್ದರು, ಸರ್ವ ಧರ್ಮ ಸಮ್ಮೇಳನಕ್ಕೆ ಅತೀ ಕಡಿಮೆ ದುಡ್ಡಿನಲ್ಲಿ ಪ್ರಯಾಣ ಮಾಡಿದ್ದರಲ್ಲದೆ, ವಾಪಾಸು ಬರಲು ಅವರ ಬಳಿ ಹಣವೇ ಇರಲಿಲ್ಲ. ಸಮ್ಮೇಳನದ ಹಿಂದಿನ ದಿನ ರಸ್ತೆಯಲ್ಲಿಯೇ ಕಳೆದಿದ್ದರು. ಕಡೆಯ ಭಾಷಣಕಾರರಾಗಿ, ಎಲ್ಲರೂ ನಿರ್ಗಮಿಸುತ್ತಿರಬೇಕಾದರೆ ತಮ್ಮ ಮಾತನ್ನು ಶುರು ಮಾಡಿದೆ, ಧ್ವನಿಯಲ್ಲಿ ಕಂಪನವಿದ್ದಂತಿತ್ತು ನಂತರ ಯಾವುದೋ ಶಕ್ತಿ ಮೈಯಲ್ಲಿ ಹೊಕ್ಕಂತೆ ಮಾತಾಡಿದೆ ಎಂದು ಸ್ವತಃ ವಿವೇಕಾನಂದರೇ ಅವರ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ಸಮ್ಮೇಳನದಲ್ಲಿ ಅವರ ಭಾಷಣ ಎಷ್ಟು ಜನಪ್ರಿಯವಾಯಿತೆಂದರೆ ಮಾರನೇ ದಿನ ಅದೇ ರಸ್ತೆಯ ಮೇಲೆ ಅವರ ಪೋಸ್ಟರ್ ಗಳು ರಾರಾಜಿಸುತ್ತಿದ್ದವು. ಎಲ್ಲ ಇಂಗ್ಲೀಷ್ ಪತ್ರಿಕೆಗಳು ಅವರನ್ನು ಹೊಗಳಿ ಬರೆದಿದ್ದವು. ಇಂತಹ ಸಣ್ಣ ವಿವರಗಳು ನಿಜವಾದ ವಿವೇಕಾನಂದರು ನಮಗೆ ಹತ್ತಿರವಾಗುವಂತೆ ಮಾಡುತ್ತವೆ. ಒಬ್ಬ ಮನುಷ್ಯ ಐಕಾನ್ ಹೌದೋ ಅಲ್ಲವೋ ಎಂಬುದು, ಆತನ ಕೆಲಸಗಳಿಂದ, ಚಿಂತನೆಗಳಿಂದ ನಮಗೆ ತಿಳಿಯಬೇಕೆ ಹೊರತು ಅವನೊಬ್ಬ ಐಕಾನ್ ಹೌದೇ ಹೌದು ಎಂದು ಒಂದು ನಿಯಮಿತ ಗುಂಪಿನ ಹೇರಿಕೆಯಿಂದಾಗಲೀ, ಜಯಂತಿ ಉತ್ಸವಗಳ ಆಚರಣೆಯಿಂದಾಗಲೇ ನಮ್ಮ ಹಾಗೂ ಮುಂದಿನ ಪೀಳಿಗೆಗೆ ತಿಳಿಯಬೇಕಿಲ್ಲ.

ವಿವೇಕಾನಂದರು ಹಿಂದುಗಳ ಬ್ರಾಂಡ್ ಅಂಬಾಸಿಡರ್ ಎಂಬಂತೆ ಬಿಂಬಿಸುವ ಕೋಮುವಾದಿಗಳ ಪ್ರಯತ್ನಕ್ಕೆ ನೀರೆರೆಚುವಂತಿರುವ ಅಮೀನ್ ಮಟ್ಟು ಬರಹ ಕಹಿಯಾದರೂ ಅರಗಿಸಿಕೊಳ್ಳಬೇಕಾದ, ವಿವೇಕಾನಂದರನ್ನು ರಾಜಕೀಯದಿಂದ ಹೊರಗಿಡಲು ಅಗತ್ಯವಾದ ಮಾಹಿತಿಪೂರ್ಣ ಲೇಖನ. ವಸ್ತು ನಿಷ್ಠತೆಯಲ್ಲಿ ಬರಹವನ್ನು ಅಲ್ಲಗಳೆಯುವಂತಿಲ್ಲವಾದರೂ, ವಿವೇಕಾನಂದರನ್ನು ತಿಂಡಿಪೋತ, ದಡ್ಡ ಶಿಕ್ಷಕ ಎಂದೆಲ್ಲ ಕರೆದಿರುವುದು ಅರಗಿಸಿಕೊಳ್ಳಲು ಕಷ್ಟವೇ. ವಿವೇಕಾನಂದರು ಮಾಂಸಾಹಾರಿಯಾಗಿದ್ದರು ಎಂಬುದೂ ನನಗೆ ದಿನೇಶರ ಲೇಖನ ಓದಿಯೇ ತಿಳಿದದ್ದು. ಗಾಂಧೀಜಿ ತಮ್ಮ ಆತ್ಮ ಸಂಯಮ ಪರೀಕ್ಷೆಗಾಗಿ ಹೆಂಗಸಿನೊಂದಿಗೆ ಬೆತ್ತಲೆ ಮಲಗಿದ್ದರು, ನೆಹರು ಮೌಂಟ್ ಬ್ಯಾಟನ್ ಹೆಂಡತಿಯೊಂದಿಗೆ ಸಲಿಗೆಯಿಂದಿದ್ದರು ಎಂಬೆಲ್ಲಾ ಮಾತುಗಳನ್ನು ಕೇಳಿದಾಗ, ಚಿಕ್ಕಂದಿನಿಂದ ಓದಿ ಕೇಳಿ ನಮ್ಮಲ್ಲೇ ಬೆಳೆಸಿಕೊಂಡು ಬಂದಿರುವ ವ್ಯಕ್ತಿಗಳ ಬಗೆಗಿನ ಗೌರವದ ಬುಡವೇ ಅಲ್ಲಾಡಿದಂತಾಗುತ್ತದೆ. ಆದರೆ ಎಷ್ಟೇ ದೊಡ್ಡವನಾದರೂ ಆತನು ನಮ್ಮೆಲ್ಲರಂತೆ ಮನುಷ್ಯ ಎಂಬುದು, ಕಂಡಕಂಡ ಬಾಬಾಗಳು, ಮಠಾಧೀಶರು, ಸ್ವಾಮೀಜಿಗಳಿಗೆ ಕಾಲಿಗೆ ಬಿದ್ದು ದೈವತ್ವಕ್ಕೇರಿಸುವ ನಮಗೆ ಅರಿವಾಗಲು, ಒಳಹೋಗಲು ಇನ್ನು ಬಹಳಷ್ಟು ಸಮಯಬೇಕೆನಿಸುತ್ತದೆ.

ಆರ್.ಎಸ್.ಎಸ್ ನ ಅಂಗವಾದ ಎ.ಬಿ.ವಿ.ಪಿ ಐಕಾನಿಕ್ ವ್ಯಕ್ತಿಯಾದ ಭಗತ್ ಸಿಂಗ್ ನಿಜದಲ್ಲಿ ಒಬ್ಬ ಕಮ್ಯುನಿಷ್ಟ್ ಆಗಿದ್ದ. ದೇವರನ್ನು ಸುತಾ ರಾಂ ನಂಬುತ್ತಿರಲಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಚಂದವೆತ್ತಿದ್ದ ಹಣವನ್ನು ಕದ್ದು ಸಿನಿಮಾ ನೋಡಲು ಹೋಗಿದ್ದ ಎಂದೆಲ್ಲಾ ನಾವು ಹೇಳದಿದ್ದರೆ, ದೇಶಕ್ಕಾಗಿ ಪ್ರಾಣ ಕೊಟ್ಟ ಆತನ ತ್ಯಾಗವನ್ನು, ಭವಿಷ್ಯದ ಭಾರತ ಹೀಗಿರಬೇಕು ಎಂದು ಆತ ಕಂಡ ಕನಸುಗಳನ್ನು, ಚಿಂತನೆಗಳನ್ನು ಕೋಮುವಾದಿಗಳ ವಶಕ್ಕೆ ಬಿಟ್ಟು ಸುಮ್ಮನೆ ಕುಳಿತಂತಾಗುತ್ತದೆ. ವಿವೇಕಾನಂದ, ಭಗತ್ ಸಿಂಗ್, ಬಿ.ಆರ್. ಅಂಬೇಡ್ಕರ್, ಗಾಂಧೀಜಿ, ಸಾವರ್ಕರ್, ಮುಂತಾದ ಇತಿಹಾಸ ಪುರುಷರನ್ನು ಅವರಿದ್ದ ಹಾಗೇ ಯಾವುದೇ ಹೇರಿಕೆ, ಇಂಟರ್ ಪ್ರೆಟೇಶನ್ನುಗಳಿಲ್ಲದೆ ಅರ್ಥಮಾಡಿಕೊಳ್ಳುವುದು ಸದ್ಯದ ಅನಿವಾರ್ಯ.

    • Ajay
    • ಜನವರಿ 20th, 2012

    ಹಾಗಿದ್ದರೆ ನಿಮ್ಮ ಪ್ರಕಾರ ಭಗತ್ ಸಿಂಗನ್ನಾಗಲೀ, ವಿವೇಕರನ್ನಾಗಲೀ ಐಕಾನ್ ಆಗಿ ತಗೊಳ್ಳುವವರು ಕೋಮುವಾದಿಗಳು! ಅವರಿದ್ದ ಹಾಗೇ ಯಾವುದೇ ಹೇರಿಕೆ, ಇಂಟರ್ ಪ್ರೆಟೇಶನ್ನುಗಳಿಲ್ಲದೆ ಅರ್ಥಮಾಡಿಕೊಳ್ಳುವುದು ಸದ್ಯದ ಅನಿವಾರ್ಯ ಎಂದಿದ್ದೀರಿ. ಅನಿವಾರ್ಯ ಇದ್ದವರು ಅದನ್ನು ಮಾಡಲಿ. ಅವರನ್ನು ಒಂದು ಪ್ರೇರಕ ಶಕ್ತಿಯನ್ನಾಗಿ ಆರಾಧಿಸುವವರು, ಇಷ್ಟಪಡುವವರು ಇದ್ದಾರೆ, ಇರುತ್ತಾರೆ. ನಿಮ್ಮ ಅನಿವಾರ್ಯತೆಯನ್ನು ಒಪ್ಪದವರನ್ನು ಕೋಮುವಾದಿಗಳನ್ನೆವುದು ಬಾಲಿಶತನ. ಸದರಿ ಪ್ರಜಾವಾಣಿಯ ಬರಹದಲ್ಲಿ ಇರುವ ವಿಷಯಗಳ ಬಗ್ಗೆ ಯಾರ ತಕರಾರೂ ಇಲ್ಲ. ತಕರಾರು ಇರುವುದು ಅದನ್ನು ಬರೆದಿರುವಂತ ಹೀನವೆನಿಸುವ ಭಾಷೆಯ ಬಗ್ಗೆ. ಆರೆಸ್ಸೆಸ್ಸು, ಬಿಜೆಪಿಗಳ ಬಗ್ಗೆ ವಿರೋಧವಿದ್ದರೆ ಅದನ್ನು ನೇರವಾಗಿ ಮಾಡಬಹುದು. ಆರೆಸ್ಸೆಸ್ಸಿಗರು ಆರಾಧಿಸುತ್ತಾರೆಂದ ಮಾತ್ರಕ್ಕೆ ವಿವೇಕರನ್ನು, ಭಗತ್ ರನ್ನು, ಸಾವರ್ಕರರನ್ನು ವೇದಿಕೆಯಾಗಿ ಮಾಡಿಕೊಂಡು ಹೊಲಸು ಕಾರಬೇಕಿಲ್ಲವಲ್ಲವೇ?

  1. ಅಜಯ್,
    ಭಗತ್ ಸಿಂಗ್ ವಿವೇಕಾನಂದರು ನನಗೆ ಆದರ್ಶಪ್ರಾಯರು ನನಗೆ ಗೊತ್ತಿರುವ ಮಟ್ಟಿಗೆ ನಾನು ಕೋಮುವಾದಿಯಲ್ಲ, ಅವರನ್ನು ಐಕಾನ್ ಆಗಿ ಪರಿಗಣಿಸಿದವರು ಕೋಮುವಾದಿಗಳೆಂದು ನಾನೆಲ್ಲೂ ಹೇಳಿಲ್ಲ. ಪ್ರೇರಕ ಶಕ್ತಿಯಾಗಿ ಆರಾಧಿಸುವ ವ್ಯಕ್ತಿಯ ಬಗ್ಗೆ ಎಲ್ಲ ವಿಷಯಗಳು ತಿಳಿದಿರಬೇಕಲ್ಲವೇ? ಭಗತ್ ಸಿಂಗ್ ಅಥವಾ ವಿವೇಕಾನಂದರನ್ನು ಕೋಮುವಾದಿಗಳು ಕೊಡುವ ಇಮೇಜಿನಿಂದ ಐಕಾನ್ ಆಗಿ ಪರಿಗಣಿಸಬಾರದೆಂಬುದೇ ಅಮೀನ್ ಮಟ್ಟು ಬರಹದ ಆಶಯ. ಕೇವಲ ಅಮೀನ್ ಮಟ್ಟುವಿನ ಬರಹದಿಂದಾಗಿ ನಿಮ್ಮ ಪ್ರೇರಕ ಶಕ್ತಿಗೆ, ಆರಾಧನೆಗೆ ದಕ್ಕೆ ಉಂಟಾಯಿತೆಂದರೆ ಅಂತಹ ಭಕ್ತಿ ನಿಜದ್ದಲ್ಲದ್ದು ಎನ್ನಬೇಕಾದೀತು. ಇತಿಹಾಸದಲ್ಲಿ ನಿಜವನ್ನು ತಿಳಿಯುವುದು ಎಲ್ಲರ ಅನಿವಾರ್ಯತೆಯೂ ಹೌದು. ರಾಜಕೀಯದ ಹೊಲಸಿಗೆ, ಓಟು ಗಳಿಕೆಗೆ ಬಿ.ಆರ್. ಅಂಬೇಡ್ಕರ್ ಅವರನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವಂತದ್ದೇ. ವಿವೇಕಾನಂದರೂ ಅದಕ್ಕೆ ಹೊರತಲ್ಲ, ಹೀಗೊಂದು ಗಟ್ಟಿ ವಿರೋಧದ ದನಿ ಹೊರಡದಿದ್ದರೇ ಜನಕ್ಕೇ ನಡೆಯುತ್ತಿರುವುದೇನೆಂಬುದೇ ತಿಳಿಯುವುದಿಲ್ಲ.

    • Ajay
    • ಜನವರಿ 23rd, 2012
  2. ಓದಿದ್ದೆ 🙂

    • Ajay
    • ಜನವರಿ 24th, 2012
  3. Nanage vivekanada. Bagatg.savarkar bagge gothhide.
    Bereyavara lekana odi theliya bekagilla. Husar. Avara bagge enu mathada bedi.

    • ಹಾಗಾದ್ರೆ ನೀವೂ ಬರೀರಿ ನಾನು ಖಂಡಿತ ಓದ್ತೀನಿ 🙂

  4. Mr.amin husar.

  5. My.numBer 9900383936
    Nanu

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: