ಹೆಸರಲ್ಲಿ ಏನಿದೆ?!
ಕಷ್ಟಗಳು ಹೇಗ್ಹೇಗೆ ಬರುತ್ತವೆ ಎಂದು ಅಂದಾಜಿಸುವುದು ತುಂಬಾ ಕಷ್ಟ! ಇಂತಹ ಕಂಪೆನಿಯ CEO ಎಂದು ತನ್ನ ಹೆಸರು ಹೇಳಿ ಪರಿಚಯಿಸಿಕೊಂಡ ಆ ಮನುಷ್ಯ ನನ್ನ ಕಿವಿಗಳು available mode ನಲ್ಲಿವೆ ಎಂದು ಪರಿಗಣಿಸಿದ ಹಾಗಿತ್ತು, ನಿಲ್ಲಿಸದೆ ಇಪ್ಪತ್ತುನಿಮಿಷಗಳವರೆಗೆ ಮಾತಾಡುತ್ತಿದ್ದ, ಕೇಳುತ್ತ ಕಣ್ಣು ತೆರೆದುಕೊಂಡೇ ನಿದ್ದೆ ಮಾಡುವುದುನನಗೆ ಹೊಸತಲ್ಲ ಅನ್ನಿ ಆದರೆ ಇದ್ದಕ್ಕಿದ್ದ ಹಾಗೆ ನನಗೆ ನೆನಪಾಗಿದ್ದು ನಾನವನ ಹೆಸರುಮರೆತಿದ್ದೇನೆಂದು. ಆತನ ಮಾತುಕೇಳಿಸಿಕೊಳ್ಳುತ್ತಲೆ ತಲೆಗೆ ಕೆಲಸ ಕೊಟ್ಟೆ, ಎಲ್ಲವನ್ನೂrecall ಮಾಡಿಕೊಳ್ಳ ತೊಡಗಿದೆ, ಕೆಲಸಕ್ಕೆ ಬಾರದ ಅವನ ಎಲ್ಲ ಮಾತುಗಳುನೆನಪಾಗುತ್ತಿದ್ದವು ಹೆಸರೊಂದು ನೆನಪಾಗಲೊಲ್ಲದು. ತುಂಬಾ ಕಾಮನ್ ಎನಿಸುವ ಹೆಸರದು,ಸುರೇಶ ಮಹೇಶ ರಮೇಶ ಸತೀಶಗಳ ಹಾಗೆ ಆದರೆ ಈ ಚಾಟರ್ ಬಾಕ್ಸ್ ಯಾವ ಶ ಎಂದು ಹೊಳೆಯಲೇ ಇಲ್ಲ. ಹೆಸರು ಮನುಷ್ಯನಿಗೆ ತುಂಬಾ ಮುಖ್ಯವೆನ್ನುತ್ತಾರೆ (ಸಾಕು ನಾಯಿಬೆಕ್ಕುಗಳಿಗೂ?!), ಎಲ್ಲರಿಗು ನೆನಪಿನಲ್ಲಿರುವಂತಹ ಹೆಸರಿಡಬಾರದಿತ್ತೆ? ಇವನಿಗೆ‘ಮಾತೇಶ’ ಎಂದಿಟ್ಟಿದ್ದರೆ ಹೆಚ್ಚು ಸರಿಯಿತ್ತು ಅಂದುಕೊಳ್ಳುತ್ತಿದ್ದಂತೆ ಮುಖದಲ್ಲಿಮುಗುಳುನಗೆ ಮೂಡಿತು. ತನ್ನ ಮಾತನ್ನು ಇವಳು ಎಂಜಾಯ್ ಮಾಡುತ್ತಿದ್ದಾಳೆ ಅನ್ನಿಸಿತೇನೋ ಅವನಿಗೆ ಪಾಪ ಇನ್ನೂ ಹುರುಪಿನಿಂದ ಮಾತನಾಡ ತೊಡಗಿದ. ನನಗೆ ಅವನ ಹೆಸರು ನೆನಪಾಗದೇ, ಅವನಿಗೆ ಉತ್ತರಿಸಲೂ, ಅವನನ್ನು ಮಾತಡದಂತೆ ತಡೆಯಲೂ ಆಗದೆ ಆ ಜಾಗ ಬಿಟ್ಟು ಎದ್ದುಬಿದ್ದು ಓಡಿಬರುವ ಹಾಗಾಗುತ್ತಿತ್ತು.
ನನ್ನ ಗೆಳತಿ ಒಬ್ಬರಿದ್ದಾರೆ ಆಕೆಯ ಹೆಸರು ’ಹೂ’ ಎಂದು, ಮೊದಲನೇ ಬಾರಿ ಕೇಳಿದಾಗನಿಮ್ಮ ಹಾಗೇ ನನಗೂ ’ವಿಚಿತ್ರ’ ಎನಿಸಿತ್ತು, ಆಕೆಯ ಹಲವು ನಾರ್ಥ್ಇಂಡಿಯನ್ ಗೆಳೆಯರು ಆಕೆಯ ಹೆಸರನ್ನು ಹಿಂದಿಗೆ ಭಾಷಾಂತರಿಸಿ ‘ಫೂಲ್’ (fool) ಎಂದುಕರೆಯುತ್ತಾರೆ. ಇಂಗ್ಲಿಷ್ ನಲ್ಲಿ ಆಕೆಯನ್ನು ರೇಗಿಸುವುದು ಇನ್ನು ಸುಲಭ ’who ishoo?’ ಎಂತಲೋ ’who let the dogs out, who(o) whoo whoo’ ಎಂದು ಕಿಚಾಯಿಸತೊಡಗುತ್ತೇವೆ. ವಿದೇಶಿಯರು ಯಾರಾದರು ಕೇಳಿದರೆ, ಇವರು ಹೂ ವೇರ್ ವಾಟ್ ಅಂತೆಲ್ಲ ಹೆಸರಿಟ್ಟುಕೊಳ್ಳುತ್ತಾರ ಎಂದು ತಲೆ ಕೆರೆದುಕೊಳ್ಳಬೇಕು. ನನ್ನ ಕ್ಲೈಂಟ್ಕಂಪೆನಿಯ HR ಒಬ್ಬರ ಹೆಸರು ವಿಚಿತ್ರಾಸಿಂಗ್ ಎಂದು, ಆಕೆಗೆ ಫೋನ್ ಮಾಡಿದಾಗಲೆಲ್ಲ,ವಿಚಿತ್ರ ದಿಸ್ ಸೈಡ್ ಎಂದು ಶುರುವಿಡುತ್ತಾರೆ, ಆಕೆಯ ಹೆಸರು ಗೊತ್ತಿಲ್ಲದಕನ್ನಡಿಗರೇನಾದರೂ ಫೋನ್ ಮಾಡಿದರೆ ಹೌದೆ! ಏನಾಯ್ತು? ಎಂದೆನ್ನಬೇಕು! ಇನ್ನು ಬರಹದ ಎಲ್ಲ ಪ್ರಾಕಾರಗಳನ್ನು ಹೆಸರಿಟ್ಟುಕೊಂಡಿರುತ್ತಾರೆ ಕೇಳಬೇಕು, ಕಾದಂಬರಿ,ಸಾಹಿತ್ಯ, ಕವನ, ಪ್ರಬಂಧ, ಸಾಹಿತಿ ಇತ್ಯಾದಿ. ಸ್ವಲ್ಪ ಯೋಚಿಸಿ ಯಾರಿಗಾದರೂ ಪರಿಚಯಿಸುವಾಗ ಇವರು ಕಾದಂಬರಿ ಎಂದು ಹೇಳಿದರೆ, ಎಷ್ಟು ಪುಟದ್ದು, ಯಾರು ಬರೆದಿದ್ದು, ಮುನ್ನುಡಿ ಬೆನ್ನುಡಿ ಯಾರದ್ದು, ಓದಬಹುದೇ? ಎಂದಂದುಬಿಟ್ಟರೆ ಆಗುವ ಪೇಚಾಟವೆಷ್ಟು?!
ಈ ಹೆಸರುಗಳನ್ನು ಕೇಳಿ, ಕುಡುಮಿ ( ಪಾಪ ಹಿಂಗಾ ಹೆಸರಿಡೋದು!), ರಾಮದಾಸ್ ಗುಹಾ(ಅಜಂತಾನೋ ಎಲ್ಲೋರಾನೋ ಕೇಳ್ಬೇಕು), ನನ್ನ ಸ್ನೇಹಿತರೊಬ್ಬರು ತಮ್ಮ ಅವಳಿ ಮಕ್ಕಳಿಗೆ’ನಗು’ ಮತ್ತು ’ನಲಿ’ ಎಂದು ಹೆಸರಿಟ್ಟಿದ್ದರು (ಇನ್ನೊಂದು ಮಗು ಆಗಿದ್ದರೆ ’ಕುಣಿ’ಎಂದು ಹೆಸರಿಡೋರಿದ್ದರ ಕೇಳ್ಬೇಕಿತ್ತು).
ಒಂದಷ್ಟು ತಮಿಳು ಹೆಸರುಗಳನ್ನುಉಚ್ಚರಿಸುವುದಂತು ಕಬ್ಬಿಣದ ಕಡಲೆ ಬಾಯಿಗೆ ಹಾಕಿಕೊಂಡು ಕಟುಮ್ ಎಂದು ಕಡಿದಂತೆ. ತಮಿಳಿನಲ್ಲಿ ಎರಡು ಳ ಗಳಿವೆ. ಒಂದು ಸಾಮಾನ್ಯ ಳ ಇನ್ನೊಂದು ರ್ಳ, ಹೆಚ್ಚಿನ ತಮಿಳು ಹೆಸರುಗಳಲ್ಲಿ ಈ ರ್ಳ ಬಳಸುತ್ತಾರೆ. ಉದಾಹರಣೆಗೆ ಅರಿವರ್ಳಗನ್, ಎರ್ಳಿಲ್ ಅಳಗಿ, ಮಲರ್ ವಿರ್ಳಿ (ಉತ್ತರ ಭಾರತೀಯರ ಬಾಯಲ್ಲಿ ಇದು ಮಲರ್ ವಿಲಿ ಎಂದಾಗುತ್ತದೆ ಜೋರಾಗಿ ಕರೆದರೆ ಎಲ್ಲಿ ’ಇಲಿ’ ’ಇಲಿ’ ಎಂದು ಹೆದರಿಕೊಳ್ಳಬೇಕು), ಪುಗರ್ಳೇಂದ್ರನ್ (ಇದನ್ನು ಸರಿಯಾಗಿ ಉಚ್ಚರಿಸಿದರೆ ನೀವು ಸಂಸ್ಕೃತ ಪಂಡಿತರು), ಯಾರ್ಳಿನಿ ಇತ್ಯಾದಿ. ಉತ್ತರ ಭಾರತದ ಕೆಲವು ಸರ್ ನೇಮ್ surname ಗಳು ಅಷ್ಟೇ ತಮಾಶೆಯೆನಿಸುತ್ತವೆ, ಥಾಂಬೆ, ಗಾವ್ಡೆ, ’ಚಟ್ಟ’ರ್ಜಿ, ಮುಖ್ಯೋಪಧ್ಯಾಯ್ (ಯಾವ ಸ್ಕೂಲಿಗೆ ಎಂದು ಕೇಳೀರಿ ಮತ್ತೆ!), ಚಟ್ಟೋಪಧ್ಯಾಯ್ (ಚಟ್ಟ ಕಟ್ಟೋದರಲ್ಲಿ ಫೇಮಸ್ ಇರ್ಬೇಕು). ಜೆಮ್ ಶೆಡ್ ಪುರದವಳಾದ ನನ್ನ ಕಲೀಗ್ ಗೆ ’ಳ’ ಉಚ್ಛರಿಸಲು ಬರದು. ಇಂಟರ್ವ್ಯೂವ್ ಗೆ ಬಂದಿದ್ದ ’Vivek Tulluri’ ಎಂಬ ಆಂಧ್ರ ಯುವಕನ ಹೆಸರನ್ನು ಯಾವ ರೀತಿ ಕೆಡಸಿಟ್ಟಳು ಎಂದು ನಾನು ಬಾಯ್ಬಿಟ್ಟು ಹೇಳೋಲ್ಲಪ್ಪ…ಕನ್ನಡ ಬಂದ್ರೆ ನೀವೆ ಅರ್ಥ ಮಾಡ್ಕಳಿ!
ಹೆಸರಲ್ಲೇ ಇರೊದು ನೋಡಿ ಎಲ್ಲಾ.. ಯಾವತ್ತೋ ಒಮ್ಮೆ ಮಾತಿಗೆ ಸಿಕ್ಕವರು ಮತ್ತೊಮ್ಮೆ ಸಿಕ್ಕಾಗ ನಮ್ಮ ಹೆಸರೇಳಿ ದ್ರೆ ಸಾಕು ಇಂಪ್ರೆಸ್ ಆಗ್ಬಿಡ್ತೀವಿ.. ಹೆಸರು ನೆನಪಿರತ್ತೆ ಅಂದ್ರೆ ಅಲ್ಲೊಂದು ಅಟ್ಯಾಚ್ಮೆಂಟ್ ಇದೆ ಅನ್ಸತ್ತೆ.. ಆದ್ರೆ ಹೆಸರನ್ನ ನೆನಪಿಟ್ಕೊಳ್ಳೋದು ತುಂಬಾನೇ ಕಷ್ಟ.. ಹೂ’ ಅಂತ ಹೆಸರಿದ್ರೆ ಯಾರೂ ಮರೆಯಲ್ಲಾ ಬಿಡಿ.. 🙂 ಆದ್ರೆ ಇವತ್ತಿನ ಅದೆಷ್ಟೋ ಹೆಸರುಗಳು ನೆನಪಿರೋದ್ ಹಾಗಿರಲಿ, ಕರೆಯೋದಕ್ಕೂ ಕಷ್ಟಾ ಕಣ್ರಿ..!
sareene neevu andiddu.. 🙂
ಹೌದು, ಹೆಸರಿನ ಸಮಸ್ಯೆ ಗಂಭೀರವಾದದ್ದು! ನಗೆತರಿಸಿದ ಲೇಖನ.
“ಇಂಟರ್ವ್ಯೂವ್ ಗೆ ಬಂದಿದ್ದ ’Vivek Tulluri’ ಎಂಬ ಆಂಧ್ರ ಯುವಕನ ಹೆಸರನ್ನು ಯಾವ ರೀತಿ ಕೆಡಸಿಟ್ಟಳು ಎಂದು ನಾನು ಬಾಯ್ಬಿಟ್ಟು ಹೇಳೋಲ್ಲಪ್ಪ…ಕನ್ನಡ ಬಂದ್ರೆ ನೀವೆ ಅರ್ಥ ಮಾಡ್ಕಳಿ!”
ಹಃಹಃಹಾ…ಇದೇ ತರಹದ ಮೆಸೆಜ್ ಒಂದನ್ನು ಓದಿದ್ದೆ. ಪಲ್ಲವಿಯನ್ನು ಶಾರ್ಟ ಮಾಡಿ ಮುದ್ದಾಗಿ, ಪಲ್ಲು ಅಂತಾ ಕರೆಯಬಹುದು. ಆದರೆ ತುಳಸಿಯನ್ನು ಶಾರ್ಟ ಮಾಡಿ ಕರೆಯೋಣಾ ಅಂದ್ರೆ..ಛೆ, ಏನ ಕಷ್ಟಾ ಈ ಹೆಸರುಗಳು!
hema nimma abhimani ri thu evandenappa matte ragale ankobedi
yakandre nimma baraha matte comment bareyotara prerane madtu
yavdu andra ? ade ri hema bekagiddare nange e tarahada hasya lekana andre tumba esta ri baikobedi plz haganta bere esta elveno goobe anbedi avu esta but hasya tumba esta office mane janjaatdalli eronige nagoke ede alva daari so adke
plz heege baritiri nimma abhimaani
kimar