ಹೇಗಿರಬೇಕು ನನ್ನವನು


image023

ನನ್ನವನು ಬಿಳಿ ಕುದುರೆಯೇರಿ ಬರುವ
ರಾಜಕುಮಾರನಾಗಿರಬೇಕೆಂದೇನಿಲ್ಲ,
ನನ್ನಲ್ಲಿ ಕನಸ ಬಿತ್ತುವ
ರೈತನಾದರೆ ಸಾಕು.

ನನ್ನನ್ನು ಅವನು ರತಿ ಮೇನಕೆ ಎಂದು
ಹೊಗಳಬೇಕಿಲ್ಲ, ನನ್ನತನಕೆ ಬೆಲೆಕೊಟ್ಟರೆ ಸಾಕು.
ನನ್ನ ಕಣ್ಣುಗಳನ್ನು ಕಮಲ, ಮೀನಿಗೆ ಹೋಲಿಸಬೇಕಿಲ್ಲ,
ನಾ ಮಲಗಿದ್ದಾಗ ಅವಕ್ಕೆ ಮುತ್ತಿಟ್ಟರೆ ಸಾಕು.

ನನ್ನವನು ಸುರಸುಂದರಾಂಗನಾಗಿರಬೇಕೆಂದೇನಿಲ್ಲ,
ಮನಸ್ಸಲ್ಲಿ ಕುರೂಪವಿಲ್ಲದಿದ್ದರೆ ಸಾಕು.

ಅವನು ಒಡವೆ ವಜ್ರಗಳ ಮಳೆಗರೆಯ ಬೇಕಾಗಿಲ್ಲ
ಆಭರಣವಿಲ್ಲದೆಯೂ ನನ್ನ ಮೆಚ್ಚಿದರೆ ಸಾಕು.

ಅವನ ಮಾತು ಮೋಡಿ ಮಾಡಬೇಕೆಂದೇನಿಲ್ಲ,
ಅದರಲ್ಲಿ ಸತ್ಯವಿದ್ದರೆ ಸಾಕು.
ಅವನು ಬಿಳಿ ಕೆನೆಹಾಲಿನಂತಿರಬೇಕೆಂದೇನಿಲ್ಲ,
ಕಪ್ಪಗಿದ್ದರೂ ಕಂಪ ಬೀರುವ ಕಸ್ತೂರಿಯಂತಿದ್ದರೆ ಸಾಕು.

ನನ್ನವನ ಪ್ರೀತಿ ಸಮುದ್ರದಷ್ಟು ಅಗಾಧವಿರಬೇಕೆಂದೇನಿಲ್ಲ,
ನನ್ನೀ ಮುಷ್ಟಿಗಾತ್ರದ ಹೃದಯ ತುಂಬುವಷ್ಟು ಪ್ರೀತಿಸಿದರೆ ಸಾಕು.

 1. wow..super

  • kallare
  • ಡಿಸೆಂಬರ್ 19th, 2008

  gud one…

  • santhosh
  • ಡಿಸೆಂಬರ್ 20th, 2008

  good imagination…………
  but yenu kelsa madthirbeku anta bardilla??!!………….lol!

  • Prasanna
  • ಡಿಸೆಂಬರ್ 21st, 2008

  good one.. wish u wil get a guy of tht kind..

 2. ಸಂತೋಷ್,

  🙂

  ಹೇಮಾ,

  “ನನ್ನ ಕಣ್ಣುಗಳನ್ನು ಕಮಲ, ಮೀನಿಗೆ ಹೋಲಿಸಬೇಕಿಲ್ಲ,
  ನಾ ಮಲಗಿದ್ದಾಗ ಅವಕ್ಕೆ ಮುತ್ತಿಟ್ಟರೆ ಸಾಕು.”

  “ನನ್ನಲ್ಲಿ ಕನಸ ಬಿತ್ತುವ
  ರೈತನಾದರೆ ಸಾಕು.”

  ಇವೆರಡೂ ಸಾಲು ತುಂಬಾ ಚೆನಾಗಿದೆ‍. ಕವಯತ್ರಿ ಆಗಿಬಿಟ್ರಿ…:)

  ನಿಮ್ಮ ಹಾಸ್ಯಪ್ರಜ್ಞೆ ಸೂಪರ್‍ ಎಂದು ಕೇಳಿದ್ದೇನೆ. ಹಾಸ್ಯ ಲೇಖನ ಯಾವಾಗ ಬರೀತಿದ್ದೀರಿ?

 3. ಕವನ ಓದಿದ ನಿಮ್ಮ ರಾಜಕುಮಾರ ಕುಶಿಯಾಗಿರುತ್ತಾನೆ.. ಮತ್ತು ಏನೂ ಬಾಹ್ಯ ಡಿಮ್ಯಾ೦ಡ್ ಬೇಡದ ನೀವು ಆತನನ್ನು ಸೋಮಾರಿ ಮಾಡಿಟ್ಟೀರಿ ಹುಶಾರ್.. ಅಟ್ ಲಿಶ್ಟ್ ದೋಸೆ ಇಟ್ಟನ್ನಾದರೂ ತಿರುವಿಸಿ ಆತನ ಕೈಲಿ..ಹ..ಹ..ತಮಾಷೆ ಮಾಡಿದೆ. ನಿಮ್ಮ ಪ್ರೀತಿ ದೊಡ್ಡದು. ಆ ರಾಜಕುಮಾರ ಅದೃಷ್ಟವ೦ತ..ರೀ.

 4. Santhosh, Kallare, Prasanna,

  Thanks all of you. 🙂

  Santhu,
  ಅದು ಕವನ ಕಣೋ ಮಾರಾಯ! matrimonial advertisement ಅನ್ಕೊಂಡ height, weight, ಕೆಲ್ಸ, ಎಲ್ಲ ಹೇಳೋಕೆ.

  ರಂಜಿತ್,
  ಥ್ಯಾಂಕ್ಸ್ ಎಲ್ಲಾ ನಿಮ್ಮಂತಹ ’ದೊಡ್ಡ’ ಕವಿಗಳ ಆಶೀರ್ವಾದ. ನಾನು ಹಾಸ್ಯ ಲೇಖನ ಬರೀತೀನಿ ಅನ್ಕೊಳ್ಳೋದೆ ಒಂದು ದೊಡ್ಡ ಹಾಸ್ಯವಾದೀತು ಎಂದು ಸುಮ್ಮನಿರುವೆ. ಮುಂದೆದಾದರೂ ಸಮಯ ಬಂದಾಗ ಬರೆಯಲು ಪ್ರಯತ್ನಿಸುವೆ.

  ಸಿದ್ದು,
  ಈಗೆಲ್ಲ ಗ್ರೈಂಡರ್ ಮಿಕ್ಸಿಗಳ ಕಾಲ ದೋಸೆ ಹಿಟ್ಟು ರುಬ್ಬಿಸಲು ಸಾಧ್ಯವಾಗದೇನೋ ಅಲ್ವೆ? ಆದ್ರೂ ನಿಮ್ಮ ಎಚ್ಚರ ನೆನಪಿನಲ್ಲಿಡ್ತೀನಿ ಮುಂದೆ ಬೇಕಾಗಬಹುದು. 🙂

  • Nagaraj
  • ಡಿಸೆಂಬರ್ 24th, 2008

  good one…

 5. ತುಂಬಾ ತುಂಬಾ ಸುಂದರವಾಗಿದೆ ಕವನ ಹಾಗೂ ಕವನದೊಳಗಿನ ಆಶಯ. ಬರೆಯುತ್ತಿರಿ.

 6. Nagaraj, Tejaswini Thank you 🙂

  • Pushpalatha
  • ಜನವರಿ 17th, 2009

  ಅಭಿನಂದನೆಗಳು ಹೇಮಾ
  ಎಲ್ಲ ಹುಡುಗೀರು ತನ್ನವನಿಂದ ಬಯಸುವಂಥ ಸಹಜ ಸರಳ ಗುಣಗಳನ್ನ ತುಂಬ ಚೆನ್ನಾಗಿ ಸೂಕ್ಷ್ಮವಾಗಿ ಹೇಳಿದಿರಿ.
  kanasannu bitthuva raithanadare saku
  kannugalige mutthittare saku
  mushti gathrada hrudayavannu preethisidare saku.

  wah.. superb..

  • Vidya
  • ಜನವರಿ 28th, 2009

  kavana tumba chennagide.. ella hudugiyara manassalli irodanna chennagi express madiddira..

 7. ಪುಷ್ಪಲತಾ ಮತ್ತು ವಿದ್ಯ,

  ನೀವು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಎಲ್ಲ ಹುಡುಗೀರ ವಿಷಯ ನನಗೆ ಗೊತ್ತಿಲ್ಲಪ್ಪ, ನಾನೂ ಹುಡುಗಿಯಾದ್ದರಿಂದ, ನನಗೂ ಅಂತವೇ ಎಕ್ಸ್ಪೆಕ್ಟೇಶನ್ಸ್ ಇರುವುದರಿಂದ ಬಹುಶಃ ಹಾಗೆ ಬರೆಯಲು ಸಾಧ್ಯವಾಗಿದೆ.

  ಧನ್ಯವಾದಗಳು 🙂

  • Basavaraj Susimath
  • ಫೆಬ್ರವರಿ 17th, 2009

  ಪ್ರತೀ ಸಾಲಿನಲ್ಲೂ ಮನಸಿನ ಸೂಕ್ಷ್ಮ ಭಾವನೆಗಳ ಸಾರ, ಧನ್ಯವಾದಗಳು

  • Prashanth
  • ಮಾರ್ಚ್ 6th, 2009

  ಕವನ ಸರಳ ಹಾಗು ಸುಂದರವಾಗಿದೆ

  ಎಲ್ಲಾ ಹುಡುಗಿರು ಇದೆ ತಾರಾ ಯೋಚನೆ ಮಾಡಿದ್ರೆ ಎಷ್ಟು ಚಂದ ಅಲ್ವ…ನಾವು ಹುಡುಗರಿಗೆ ಚಿನ್ನ, ಬೆಳ್ಳಿ ಮೇಲೆ ಕರ್ಚು ಮಾಡೋ ದುಡ್ಡು ಉಳಿಯುತ್ತೆ …

  Just kiddin'(ಯಾಕಂದ್ರೆ ಹಂಗಾಗಲ್ಲ ಅಂತ ಗೊತ್ತು) 😉

  ಮೈಸೂರು ಹುಡುಗ

  • Siddesh Chavadi
  • ಏಪ್ರಿಲ್ 20th, 2009

  nice one kanri, higr barita iri

  • savitha
  • ಮಾರ್ಚ್ 9th, 2012

  awesome my dear

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: