ಹೀಗೊಂದು ಸಂಜೆ!

the_girl_in_the_rain_by_best10photos

ಇವತ್ತೂ ಆಫೀಸ್ ನಿಂದ ಹೊರಡೋ ಅಷ್ಟೊತ್ತಿಗೆ ಅರ್ಧಗಂಟೆ ಲೇಟ್ ಆಗಿತ್ತು. ಗಾಡಿ ಸ್ಟಾರ್ಟ್ ಮಾಡ್ತಿದ್ದ ಹಾಗೆ ಆಕಾಶದಾಳದಲ್ಲೆಲ್ಲೋ ಧಡುಂ ಅಂದ ಸದ್ದು. ಒಂದು ವಾರದಿಂದ ನೆನಿತಾ ಇದೀನಿ, ಇವತ್ತು ಮಳೆ ಬರೋದು ಬೇಡಪ್ಪಾ ಅಂತ ತಲೆ ಮೇಲೆತ್ತಿ ಮೋಡಕ್ಕೊಂದು ಸಂದೇಶ ಕಳುಹಿಸಿದೆ. ’ಹಹ್ ನೀನೆಷ್ಟರವಳು!’ ಎಂದುಕೊಂಡಿತೋ ಏನೋ, ಮುಂದಿನ ಎರಡು ನಿಮಿಷಕ್ಕೆಲ್ಲ ದಪ್ಪ ದಪ್ಪ ಹನಿಗಳು ಬೀಳೋಕೆ ಶುರು ಆಯಿತು. ’ಇವತ್ತಂತು ನಿನ್ ಕೈಲಿ ಆಗೋದಿಲ್ವೆ, ಈಗ ನೆಂದ್ರೆ ನಾಳೆ ಜ್ವರ ಬಂದು ಮಲಗಿಬಿಡ್ತೀಯ ನೋಡ್ಕೋ!. ನನ್ನೊಳಗು ನನ್ನನ್ನ ಎಚ್ಚರಿಸಿತು. ದಿನಾ ಮಳೇನ ಎನ್ಜಾಯ್ ಮಾಡ್ಕೊಂಡು ಡ್ರೈವ್ ಮಾಡ್ತಿದ್ದ ನನಗೆ ಇವತ್ತು ನೆನಿಲೇಬಾರದು ಅನ್ಸೋ ಅಷ್ಟು ಬೇಜಾರಾಗಿತ್ತು. ಒಂದಿನ್ನೂರು ಮೀಟರ್ನಷ್ಟು ಮುಂದೆ ಹೋಗಿ ಹೋಟೇಲ್ ಒಂದರ ಹತ್ರ ನಿಲ್ಲಿಸಿದೆ.

ಆ ಹೋಟೇಲೋ ತೀರಾ ಸಣ್ಣದು, ಒಂದು ಕಾಫಿ, ಒಂದು ವಡೆ ತಗೊಂಡು ಹೊರಗಡೆ ಬೀಳ್ತಿದ್ದ ಮಳೆ ಕಾಣೋ ಹಾಗೆ ಮೂಲೆಯ ಟೇಬಲ್ ಒಂದರಲ್ಲಿ ಕೂತು ಇಷ್ಟಿಷ್ಟೇ ಕಾಫಿ ಕುಡೀತಾ ವಡೆ ತಿಂದು ಮುಗಿಸಿದ್ರೆ, ಬೆಳಗ್ಗೆ ಇಂದ ಇದ್ದ ಬೇಜಾರೆಲ್ಲ ಮಾಯ ಮಾಯ!!! ಈ ಕಾಫಿಗೆ ಏನು ಪವರ್ ಇದೆ ಅಂತೀರಾ! ಫುಲ್ ರಿಫ್ರೆಶ್ ಆಗಿ, ಆ ಮಳೇಲೆ ಗಾಡಿ ಸ್ಟಾರ್ಟ್ ಮಾಡ್ಕೊಂಡು, ಮುಖಕ್ಕೆ ರಾಚುತಿದ್ದ ಮಳೆನೀರನ್ನ ನೆಕ್ಕಿಕೊಂಡು, ಬರ್ರ್ ಅಂತ ಗಾಡಿ ಓಡಿಸ್ಕೊಂಡು, ಮಳೆಗೆ ರಸ್ತೆ ಕಾಣದೆ ಸುಮ್ ಸುಮ್ನೆ ಹಾರನ್ ಹೊಡೆದು, ಪಕ್ಕದಲ್ಲಿ ಬರ್ತಿದ್ದ ಪಲ್ಸರ್ ಅವ್ನು ಗುರಾಯಿಸಿದಾಗ ಅವ್ನಿಗೆ ಕಣ್ಣು ಹೊಡೆದು, ಪಾಪ ಅವನು ಆಟೋದವನಿಗೆ ಗುದ್ದೇ ಬಿಡುವವನ ಹಾಗೆ ಹೋಗಿ ಬ್ಯಾಲೆನ್ಸ್ ಮಾಡ್ಕೊಂಡು ಮುಂದಕ್ಕೋದ. ಮಳೇಲಿ ಒದ್ದೆ ಮುದ್ದೆ ಆಗಿದ್ನಲ್ಲ, ಎಲ್ಲಿಗೂ ಹೋಗೋ ಮನಸ್ಸಾಗದೆ ರಥಾನಾ ಮನೆ ಕಡೆ ತಿರುಗಿಸ್ದೆ.

ಮನೆಗೆ ಬಂದವಳೇ ಹನ್ನೆರೆಡು ಅಡಿ ದೂರವಿರುವಾಗ್ಲೇ ಅಮ್ಮಾಆಆಆ! ಅಂತ ಕೂಗಿ, “ಅದ್ಯಾಕೆ ಹಂಗ್ ಬಡ್ಕೋತಿ ಇಲ್ಲೇ ಇದೀನಿ, ಇವತ್ತು ನೆನಕೊಂಡ್ ಬಂದಿಯಾ? ಹಾಳು ಹುಡುಗಿ ನಿನಗೇನ್ ಬಂದಿರೋದು. ಶೀತಗೀತ ಆಗಿ ಜ್ವರ ಬಂದು ಮಲಗ್ತೀಯ ನೋಡು ಆಗ ಗೊತ್ತಗುತ್ತೆ………” ಮಾತಾಡ್ತಲೇ ಇದ್ದ ಅಮ್ಮನ್ನ ಓಡೋಗಿ ಒದ್ದೇ ಮೈಯಲ್ಲೇ ತಬ್ಕೊಂಡು, ಅವಳತ್ರ ಮುಖ ತಿವಿಸಿಕೊಂಡು ಬಚ್ಚಲ ಮನೆಗೋಡಿದೆ. ಬಟ್ಟೆ ಬದಲಿಸಿ, ತಲೆ ಒರೆಸ್ಕೊಂಡು, “ಅಮ್ಮಾ ಚಳಿ ಆಗ್ತಿದೆ ಒಂದ್ ಕಪ್ ಕಾಫೀ….” ಅಂತ ಅಂಗಲಾಚಿ, ಬಿಸಿ ಬಿಸಿ ಕಾಫಿ ಕಪ್ ಹಿಡ್ಕೊಂಡು, ಕಂಪ್ಯೂಟರ್ ಆನ್ ಮಾಡಿ ಕೂತ್ರೆ ಚಾಟಿಗೆ ಸಿಕ್ಕ ಗೆಳೆಯನ ಮೊದಲನೆ ಮಾತೇ ’ಹೇಗಿತ್ತೆ ದಿನ?’ ಎಂದು, ಮುಗುಳ್ನಕ್ಕೆ, ’ಎಂತು ಬಣ್ಣಿಸಲಿ ಬರಿ ಮಾತಿನಲಿ!’ ಅಂತಂದು ಕಣ್ಮಿಟುಕಿಸಿದೆ!

8 Responses to “ಹೀಗೊಂದು ಸಂಜೆ!”

  1. Rajesh Manjunath Says:

    Nice One Hema :)

  2. Gurumurthy Says:

    ಸೂಪರ್ ಕಣ್ರೀ,
    ನಾನು ಬೆಂಗಳೂರಿನ ಸಂಜೆ ಸರಿಯಾಗಿ ಆಫೀಸ್ ಬಿಡೋ ಟೈಮ್ ಗೆ ಬಾರೋ ಮಳೆ ನ ತುಂಬಾ ಮಿಸ್ ಮಾಡ್ಕೋತ ಇದೀನಿ
    ಆ ಸಂಜೆ ಪಾನೀಪುರಿ, ಭೇಲ್ಪುರಿ, ಮಂಡಕ್ಕಿ ಮಸಾಲ, ಕಾಫಿ ಅದೆಲ್ಲ ನೆನಸಿಕೊಂಡ್ರೆ ಮತ್ತೆ ಹೋಗಿಬಿಡೋಣ ಅಲ್ಲೇ ಅನಿಸುತ್ತೆ,
    ತುಂಬಾ ಚೆನ್ನಾಗಿ ನೆನಪು ಮಾಡಿಕೊಟ್ರಿ ಅದನ್ನೆಲ್ಲಾ

  3. vi.ra.he Says:

    ಸುಮ್ ಸುಮ್ನೆ ಹಾರನ್ ಹೊಡೆದು, ಪಕ್ಕದಲ್ಲಿ ಬರ್ತಿದ್ದ ಪಲ್ಸರ್ ಅವ್ನು ಗುರಾಯಿಸಿದಾಗ ಅವ್ನಿಗೆ ಕಣ್ಣು ಹೊಡೆದು, ಪಾಪ ಅವನು ಆಟೋದವನಿಗೆ ಗುದ್ದೇ ಬಿಡುವವನ ಹಾಗೆ ಹೋಗಿ ಬ್ಯಾಲೆನ್ಸ್ ಮಾಡ್ಕೊಂಡು …

    ha ha.. LOL

  4. kallare Says:

    ಕಂಪ್ಯೂಟರ್ ಆನ್ ಮಾಡಿ ಕೂತ್ರೆ “ಚಾಟಿಗೆ” ಸಿಕ್ಕ…. Paapa ava!!

  5. kannada songs Says:

    copee with vade full super agirutthe :)

  6. ಹರೀಶ ಆತ್ರೇಯ Says:

    ಆತ್ಮೀಯ
    ಮಳೆಯಲ್ಲಿ ನೆನಯೋದು ಚೆನ್ನ.ಸ೦ಜೆ ಆಫೀಸಿನಿ೦ದ ಮನೆಗೆ(ರೂಮಿಗೆ) ಹೋಗುವಾಗ ಮಳೆ ಬರ್ತಿದೆ ಅ೦ತ೦ದ್ರೆ ನೆನ್ಕೊ೦ಡೇ ಹೋಗೋದು ಜನಗಳು ನನಗೆಲ್ಲೋ ಹುಚ್ಚು ಅ೦ತ೦ದ್ಕೊ೦ಡು ನಗ್ತಿದ್ರೆ ನನ್ನ ಸಹೋದ್ಯೋಗಿಗಳು ’ರೀ ಲ್ಯಾಪ್ಟಾಪ್ ನೆ೦ದು ಹೋದೀತು’ ಅ೦ತ ಕಾಳಜಿ ತೋರಿಸ್ತಾರೆ.ಆದ್ರೂ ಮಳೆಯಲ್ಲಿ ಎ೦ಥದೋ ಮೋಡಿ ಇದೆ.
    ಅಲ್ರೀ ಹೇಮಾ ಆ ಹುಡುಗನಿಗೆ ಕಣ್ಹೊಡೆದುಬಿಟ್ರಿ ನಿಜ ಅವನ ಗತಿ ಏನ್ರೀ ? ಆ ಕ್ಷಣದಲ್ಲಿ ಅವನು ಆಟೋದವನಿಗೆ ಗುದ್ದಕ್ಕೆ ಹೋದವನು ಬಚಾವ್ ಅಗಿದಾನೆ ಆಮೇಲೆ ಏನು ಮಾಡಿಕೊ೦ಡನೋ?
    ಹರೀಶ ಆತ್ರೇಯ

  7. Basavaraj Vannur Says:

    ಪಾಪ, ಪಲ್ಸರ್ ಹುಡುಗನಿಗೆ ಏನಾಯ್ತು? ಯಾಕ್ರೀ ಕಾಡತೀರಾ ಹುಡಗ್ರನ್ನಾ? :-)
    ಕಾಫಿ ಅಂದ್ರೆ ನೆನಪಾಯ್ತು, ಆ ಜೆಪಿ ನಗರ್ ಸುಖಸಾಗರ್ ಕಾಫಿ ರುಚಿಯೋ ರುಚಿ..

  8. hemapowar123 Says:

    ರಾಜೇಶ್, ಗುರುಮೂರ್ತಿ ಮತ್ತು ವಿಕಾಸ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು :)

    ಕಲ್ಲರೆ ಅವರೆ ಅದು ಆನ್ಲೈನ್ ಚಾಟ್, ಚಾಟಿ ಏಟಲ್ಲ ಮತ್ತೆ! :)

    ಕನ್ನಡ ಹಾಡಿಗೆ ನಮಸ್ಕಾರ ಮತ್ತು ಮೆಚ್ಚಿದ್ದಕ್ಕೆ ಧನ್ಯವಡ (ವಾದ) :)

    ಹರೀಶ ಆತ್ರೇಯ ಅವರೇ,
    ಆಮೇಲೇನಾದನೋ ನನಗೂ ಗೊತ್ತಿಲ್ಲ, :) ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಥ್ಯಾಂಕ್ಸ್

Leave a Reply